ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೩

ಮೋಡಿಯಲ್ಲಿ ಬರೆದ ಹಳೆಯ ಕಾಗದಗಳು – ೩   (ಗೋವಿಂದಭಟ್ಟರ ಹೆಸರಿನಲ್ಲಿನದು)

ಗೋವಿಂದಭಟ್ಟರ ಕಾಲದ ಇನ್ನೊಂದು ಕಾಗದ – ಚಿತ್ರಭಾನು ಸಂವತ್ಸರದ ಭೂದಾನ ಪತ್ರ ಬರೆದಾದಮೇಲೆ ೩೧ ವರ್ಷಗಳ ನಂತರ – ಪ್ರಮಾಥಿ ನಾಮ ಸಂವತ್ಸರ – ಶಕೆ ೧೭೧೫ ರಲ್ಲಿ ಬರೆದ ಜಮೀನನ್ನು ಇನಾಮ ಆಗಿ ಮಾಡಿಕೊಟ್ಟ ಮತ್ತೊಂದು ಹಳೆಯ ಕಾಗದ. ಪರಾಮರ್ಶೆ ಮಾಡಿ ನೋಡಿದರೆ ಸಂವತ್ಸರದ ಹೆಸರನ್ನು ತಪ್ಪಾಗಿ, ಪ್ರಮಾಥಿ ಎಂದು ಉಲ್ಲೇಖಿಸಲಾಗಿದೆ ಎಂದು ಅನಿಸುತ್ತದೆ. ಅದು ಪ್ರಮಾದಿ ಎಂದಾಗಬೇಕಿತ್ತು.  

ಶಕೆ ೧೭೧೫ ಅಂದರೆ (೭೮ ಕೂಡಿಸಿದಾಗ ಬರುವ) ಕ್ರಿ.ಶ. ೧೭೯೩ ನೆ ಇಸವಿ. ಮೊದಲ ಕಾಗದ ಬರೆದ ೩೧ ವರ್ಷಗಳ ನಂತರ ಬರೆಯಲಾದುದು. ನನಗೆ ಸಿಕ್ಕಿದ್ದೂ ನಕಲು ಪ್ರತಿಯೆ ಇರಬೇಕು. ಮೊದಲನೆ ಕಾಗದದಂತೆಯೆ ಇರುವ ಒತ್ತುಕರಡಿನಂತಿರುವ ಕಿರಿಅಗಲದ ಉದ್ದನೆಯ ಕಾಗದ. ಮೊದಲ ನಕಲು ಪತ್ರದ ಲಿಪಿಕಾರನದೆ ಕೈಬರೆಹ. ಅದು ಶಕೆ ೧೭೧೫ ಇದ್ದುದೇ ಸರಿಯಾಗಿದ್ದರೆ,ಲಿಪಿಕಾರ ಸಂವತ್ಸರದ ಹೆಸರನ್ನು ತಪ್ಪಾಗಿ ಬರೆದಿದ್ದಾನೆ ಎಂದು ಕಾಣುತ್ತದೆ, ಏಕೆಂದರೆ,  ಸಂವತ್ಸರಗಳ ಕ್ರಮದಲ್ಲಿ ೧೩ನೆಯದು ಪ್ರಮಾಥಿ, ೧೬ನೆಯದು ಚಿತ್ರಭಾನು. ೪೬ ನೆಯದು ಪರಿಧಾವಿ, ೪೭ನೆಯದು ಪ್ರಮಾದಿ (ಅಥವಾ ಪ್ರಮಾದಿನ್). ಚಿತ್ರಭಾನುವಿನಲ್ಲಿ (ಶಕೆ ೧೬೮೪) ಬರೆದ ೩೧ ವ₹ರ್ಷಗಳ ನಂತರ ಬರೆದುದು ಎಂದರೆ ೪೭ ನೆ ಕ್ರಮಾಂಕದಲ್ಲಿ ಬರುವ ಪ್ರಮಾದಿ ನಾಮ ಸಂವತ್ಸರ (ಶಕೆ ೧೭೧೫). ಆದರೆ ಈ ಕಾಗದದಲ್ಲಿ ಹೆಸರಿಸಲ್ಪಟ್ಟಿದ್ದು ಪ್ರಮಾಥಿ ನಾಮ ಸಂವತ್ಸರ.

ಈ ತಪ್ಪಿಗೆ ನಾನು ಮೂರು ಕಾರಣಗಳನ್ನು ಊಹಿಸುತ್ತೇನೆ. ಇನ್ನೊಬ್ಬರು ಮೂಲಪ್ರತಿಯ ಮಜಕೂರನ್ನು ಓದುತ್ತ ಅಥವಾ ಹೇಳುತ್ತ ಹೋದಹಾಗೆ ಲಿಪಿಕಾರ ಅದನ್ನು ಕೇಳಿ ಬರೆದಿದ್ದರೆ, ಪ್ರಮಾದಿ ಎಂಬ ಶಬ್ದವನ್ನು ಕಿವಿ ಪ್ರಮಾಥಿ ಎಂದು ತಪ್ಪಾಗಿ ಗ್ರಹಿಸಿದ್ದೀತು. ಇಲ್ಲವೆ ನೋಡಿಕೊಂಡು ಬರೆದಿದ್ದರೆ, ಕೈತಪ್ಪಿನಿಂದಲೊ, ಅನವಧಾನದಿಂದಲೊ, ಹೆಚ್ಚೂಕಡಿಮೆ ಏಕರೂಪದಲ್ಲಿ ಕಣ್ಣಿಗೆ ಕಾಣುವ, ಏಕ ಉಚ್ಚಾರದ ಧ್ವನಿಯಲ್ಲಿ ಕಿವಿಗೆ ಬೀಳುವ, ಈ ಪ್ರಮಾದಿ ಎಂಬು ಶಬ್ದ ಬರವಣಿಗೆಯಲ್ಲಿ ಕಾಗದದ ಮೇಲೆ ಇಳಿದಾಗ ಪ್ರಮಾಥಿಯಾಗಿರುವ ಸಾಧ್ಯತೆಯೂ ಇದೆ. ಇದೂ ನಕಲು ಪ್ರತಿಯೆಂದೆ ನನಗೆನಿಸುತ್ತದೆ. ಕೊನೆಯ ಕಾರಣ, ಮೂಲ ಕಾಗದವನ್ನು ಬರೆದ ವ₹ರ್ಷದಲ್ಲಿಯೆ ಅಥವಾ ಮರುವರ್ಷ ನಕಲು ಪ್ರತಿ ತೆಗೆದಿದ್ದರೆ,  ಲಿಪಿಕಾರನು (ವಿಷಯವನ್ನು ಬಲ್ಲವನಾಗಿದ್ದರೆ) ಚಾಲ್ತಿಯಲ್ಲಿದ್ದ ಆ ಸಂವತ್ಸರದ ಹೆಸರನ್ನು ಹಾಗೆ ಬರೆಯುತ್ತಿರಲಿಲ್ಲ. ಇದು ಬಹಳ ವರ್ಷಗಳು ಗತಿಸಿದ ಮೇಲೆ ಮಾಡಿದ ಕೆಲಸವಾಗಿರ ಬೇಕು.

ಇನ್ನು ಇದರಲ್ಲಿನ ಉಳಿದ ವಿವರಗಳು : ಶುರುವಾತಿನಲ್ಲಿ ಮೇಲುಗಡೆ, ನಡುವೆ ಬರೆದ- ಶ್ರೀ ಕಾರದೊಂದಿಗೆ, ನಂತರ ಒಕ್ಕಣೆಯಲ್ಲಿ ಕಾಗದವನ್ನು ಬರೆದ ದಿನ – ಜ್ಯೇಷ್ಠ ವದ್ಯ ದ್ವಾದಶಿ, ಗುರುವಾರ.  ಪ್ರಾರಂಭದ, ದೇವನಾಗರಿ ಲಿಪಿಯಲ್ಲಿ ಬರೆಯಲಾದ ದೇವತಾ ಸ್ತುತಿಪರ ಸಂಸ್ಕೃತ ಶ್ಲೋಕ ನಮಸ್ತುಂಗಿ ….., ಸಂವತ್ಸರ ಇತ್ಯಾದಿ……ಯಾರಿಗೆಂದು ಉದ್ದೇಶಿಸಿ ಬರೆದುದು ಎಂದು ವಿವರಿಸುವ ೮ || ಸಾಲುಗಳು ಇವೆ. ನಂತರದ್ದು ಮೋಡಿ ಲಿಪಿಯಲ್ಲಿನ ಬರವಣಿಗೆ ೧೦ || ಸಾಲುಗಳು, ಮತ್ತೆ ೨ ಸಾಲು ದಾನಪತ್ರಗಳಲ್ಲಿ ರೂಢಿಯಂತೆ ಬರೆಯುವ  “ಸ್ವದತ್ತಾ ……” ಎಂಬ ಸಂಸ್ಕೃತದಲ್ಲಿನ ಎಚ್ಚರಿಕೆಯ ಮಾತುಗಳ ದೇವನಾಗರಿಯಲ್ಲಿ ಬರೆದ ಶ್ಲೋಕ, ಹೀಗೆ ೨೨ ಸಾಲುಗಳು, ನಂತರ ಅದೇ ಕಾಗದದ ಹಿಂದೆ  “ಸ್ವದತ್ತಾ …..” ಎಂಬ ಭೂಮಿಯ ವಿಶೇಷ ವರ್ಣನೆಯ ೨ ನೆ ಸಂಸ್ಕೃತ ಶ್ಲೋಕದ ೨ || ಸಾಲುಗಳು, ಕೊನೆಯಲ್ಲಿ ದಾನ ಪತ್ರದ ಉಳಿದ ಭಾಗ ಮೋಡಿಯಲ್ಲಿ ಬರೆದ ೨ || ಸಾಲುಗಳು ಹೀಗೆ, ಆ ಪಾನಿನ ಮೇಲೆ ಒಟ್ಟು ೫ ಸಾಲುಗಳು ಇವೆ.

ಲಿಪ್ಯಂತರ

ಮೊದಲ ಪಾನು

oldest_doc_1

श्री

नमस्तुंगि शिरस्तुंगि छ्त्रचामरवे
त्रैलॊक्यनगरारंभे मूलस्तंभाय शांभ
वे ॥१॥ स्वस्ति श्री नृपशालिवाहन श
के १७।१५ प्रमाथी नाम संवत्सर ज्यॆष्ठ
वद्य १२ गुरुवासरे वेदशास्त्र संपंन रा
जमान्य राजेश्री गॊविंदभट्ट बिंन मा
णीक भट्ट गॊत्र काश्यप सूत्र आश्वला
यन जॊशी मंगळवॆढे वास्तव्य मुरगॊड स्वा
मी याशी

लावरून आपण थोर सत्पात्र कुटुंब वत्सल हे जाणून उ
पजीविका बदल मौजे आलदकटी क. (कर्यात) मजकूर एथील खा
लसात जमीन पैकी अर्धा चिगर निधिनिक्षेप सहि
त इनाम करार करून देऊन चतुस्सीमा स्थापन करून
दिले असो आपले वंशपरंपरा अनुभव करून सरकारास
कल्याण चिंतून सुखरूप राहणे ह्या विषयी
कोणी दिकत करतिल त्यास कुलस्वामीचे शपत असे
या विषयी श्लोके
स्वदत्ता द्विगुणं पुण्यं परदत्तानुपालनं ॥ परद
त्तापहारेण स्वदत्ता निष्फलं भवेत ॥१॥

ಅದರ ಬೆನ್ನು ಪಾನು

oldest_doc_1

स्वदत्ता दुहिता भूमि परदत्ता सहोदरी
अन्यदत्ताभवेन्माता यो हरो त्रिषुसं
गमे ॥२॥
हे समजून कोणी दिकत न करिता चलउन देतील जाणी
जे छ २२ जिल्हेज सु अर्बा सितैन मयातैन व अलफे ब
हुत काय लिहिले विनंती मोर्तबा दस्तूर


ನನ್ನ ಟಿಪ್ಪಣಿಗಳು

ಈ ಭೂದಾನ ಪತ್ರದಲ್ಲಿ ಹೇಳಲಾದ ಸಂಖ್ಯೆಗಳು :
ಛ ೨೨ – ೨೨ ನೆ ತಾರೀಖು ; ಜಿಲ್ಲೇಜ – ಮೇ ತಿಂಗಳು ; ಅಲಫೆ – ೧೦೦೦ + ಮಯಾ ತೈನ – ೨೦೦ (?) + ಸಿತೈನ – ೬೦ + ಅರ್ಬಾ – ೪ = ೧೨೬೪. ಇದಕ್ಕೆ ೬೦೦ ಕೂಡಿಸಿದಾಗ = ಕ್ರಿ.ಶ.೧೮೬೪ ನೆ ಇಸವಿ ಬರುತ್ತದೆ.
ಆದರೆ ಕಾಗದದ ಪ್ರಾರಂಭದಲ್ಲಿಯೆ ದೇವನಾಗರಿಯಲ್ಲಿ ಬರೆದ ಶ್ಲೋಕದ ನಂತರ ಹೇಳಲಾದ ದಿನಾಂಕದ (ಹಾಗೂ ಯಾರಿಗೆ ಮಾಡಿಕೊಟ್ಟ ಕಾಗದ) ಪ್ರಕಾರ ಆ ದಿನ – ಶಕೆ ೧೭೧೫, ಪ್ರಮಾದಿ (ತಪ್ಪಾಗಿ ಪ್ರಮಾಥಿ ಎಂದು ಬರೆಯಲಾಗಿದೆ) ನಾಮ ಸಂವತ್ಸರದ ಜ್ಯೇಷ್ಠ ವದ್ಯ ದ್ವಾದಶಿ, ಗುರುವಾರ. ಇದನ್ನೆ ಕ್ರಿಸ್ತ ಶಕದಲ್ಲಿ ಪರಿವರ್ತಿಸಿ ಹೇಳುವದಾದರೆ – ಶಕೆ ೧೭೧೫ + ೭೮ = ಕ್ರಿ.ಶ.೧೭೯೩. ಮೊದಲಿನ ಕಾಗದದ ನಂತರದ ೩೧ನೆ ವ₹ರ್ಷ. ಅಲ್ಲದೆ ಈ ಕಾಗದವೂ ಗೋವಿಂದಭಟ್ಟರ ಹೆಸರಿನಲ್ಲೆ ಮಾಡಿಕೊಟ್ಟದ್ದು. ಈ ಎರಡು ಅಂಶ ಗಳನ್ನು ನೋಡಿದಾಗ ಮೋಡಿಯಲ್ಲಿ ಬರೆದ ಅರಬೀ ಸಂಖ್ಯಾವಾಚಕ ಶಬ್ದಗಳನ್ನು ಲಿಪ್ಯಂತರಮಾಡುವಾಗ ತಪ್ಪಾಗಿದೆ ಎಂದು ಅನಿಸುತ್ತದೆ.

ಈ ಕಾಗದದಲ್ಲಿ ಬಂದಿರುವ ಆ ಕಾಲದ ಮತ್ತೂ ಕೆಲವು ಶಬ್ದಗಳು :
ಕಮಾವೀಸದಾರ – ಮಾಮಲೇದಾರ ; ಥೋರ – ಹಿರಿಯ : ಕರ್ಯಾತ – ತಾಲೂಕು ; ಮಜಕೂರ – ಅಲ್ಲಿಯ ; ಖಾಲಸಾತ ಜಮೀನ – ಸರಕಾರಿ ಜಮೀನು ; ಭೂಸ್ವಾಸ್ಥಾ – ಭೂಮಿ ವ್ಯವಸ್ಥೆ ; ಮೋರ್ತಬಾ – (ಇನ್ನು) ಹೆಚ್ಚಿಗೇನೂ ಇಲ್ಲ.