ಗೋವಿಂದಭಟ್ಟರ ಕಾಲದ ಭೂದಾನ ಪತ್ರ ೨

ಮೋಡಿಯಲ್ಲಿ ಬರೆದ ಹಳೆಯ ಕಾಗದಗಳು – ೨
(ಪೂಜಾ, ನಂದಾದೀಪ, ನಿತ್ಯ ನೈವೇದ್ಯಗಳಿಗಾಗಿ ಮಾಡಿದ ದಾನಪತ್ರ. ಗೋವಿಂದಭಟ್ಟರ ಹೆಸರಿನಲ್ಲಿನದು)
ಕ್ರಿ.ಶ. ೧೭೭೧ ನೆ ಇಸವಿ ಸೆಪ್ಟೆಂಬರ ೧ ರಂದು ಬರೆದ ಭೂದಾನ ಪತ್ರ

ಗೋವಿಂದಭಟ್ಟರ, ಮುರಗೋಡದಲ್ಲಿನ ಪ್ರಾರಂಭದ ದಿನಗಳಲ್ಲಿ ಬರೆಯಲಾದುದು –  confirmation of ಇನಾಂ (?) ಸಂಬಂಧದ ಕಾಗದ.

ಇಲ್ಲಿ ಒಂದು ಮಾತು ಹೇಳಬೇಕು. ಮುರಗೋಡದಲ್ಲಿ ನಮ್ಮ ಹಿರಿಯರಿರುತ್ತಿದ್ದ ಈಗ ಪಾಳುಬಿದ್ದು ಅವಶೇಷ ಸ್ಥಿತಿ – ರೂಪದಲ್ಲಿರುವ ಮನೆಯ ಬಹಳ ಹತ್ತಿರವೆ ಜಂಬುಲಿಂಗ ಹೆಸರಿನ ಸಾಕಷ್ಟು ಹಳೆಯ ಈಶ್ವರ ದೇವಸ್ಥಾನ ಈಗಲೂ ಇದೆ. ಬಹುಶಃ ನನ್ನ ಅಜ್ಜ – ದತ್ತಕ ಹೋಗಿದ್ದ ತಂದೆಯ ಜನಕ ತಂದೆ – ಶ್ರೀ ರಾಮಾಚಾರ್ಯರು ಆ ಗುಡಿಯ ಪೂಜಾ ಮಾಡುತ್ತಿದ್ದರೆಂದು ಅನಿಸುತ್ತದೆ. ಖಚಿತವಾಗಿ ಹೇಳಲಾರೆ.

ಹನ್ನೆರಡೂವರೆ ಸೆಂ. ಮೀ. ಅಗಲ ಮತ್ತು ೨೨ ಸೆಂ. ಮೀ ಉದ್ದದ (ಐದು ಇಂಚು ಅಗಲ ಮತ್ತು ಏಳೂವರೆ ಇಂಚು ಉದ್ದ) ಕಾಗದದಲ್ಲಿ ಒಟ್ಟು ಹದಿನೆಂಟೂವರೆ ಸಾಲುಗಳಲ್ಲಿ ಬರೆಯಲ್ಪಟ್ಟಿದೆ. (ಮೇಲು ಪಾನಿನ ಮೇಲೆ, ನಡುವೆ ಶ್ರೀಕಾರದ ಸ್ಥಳದಲ್ಲಿ ಬರೆದ ಶ್ರೀ ಶಂಭು ಪ್ರಸನ್ನ (?)  ಮತ್ತು ಕೆಳಗೆ ಎಡ ಮೂಲೆಯಲ್ಲಿ ಒಂದು ಶಬ್ದ ಮತ್ತು ಬಲ ಮೂಲೆಯಲ್ಲಿ ನಕಲ (ಎಂಬ ಶಬ್ದ) ನಂತರ ಮುಖ್ಯ ಮಜಕೂರು ಒಂಬತ್ತು ಸಾಲುಗಳಲ್ಲಿ,  ಅದರ ಮುಂದಿನ ಭಾಗ ಒಂಬತ್ತೂವರೆ ಸಾಲುಗಳು ಬೆನ್ನುಪಾನಿನ ಮೆಲೆ, ಕೊನೆಯಲ್ಲಿ, ಕೆಳಗಿನ ಬಲ ಮೂಲೆಯಲ್ಲಿ ಸಹಿ, ಹೀಗೆ ಲಿಖಿತವಾಗಿದ್ದಿದೆ.

ಲಿಪ್ಯಂತರ

ಮೊದಲ ಪಾನು

oldest_doc_1

श्री शंभु

शभुलिंग                                   नकल

राजश्री गणेश बल्लाळ हवलदार
परगणा मुरगोड गोसावि यासि
अखंडित लक्ष्मीअलंकृत राजमान्य राजश्री जीवाजी
भोसले तालुक मनोळि दंडवत
विनंती उपरि वा राजश्री श्री गोविदभ
ट जोशी मंगळवेडकर वस्ती मजकूर याज कडे क
सबा मजकूर श्री देवाचि पूजा आहे श्री
देवाचे नंदादीप व नित्य नैवेद्य व मंत्र
पुष्प आराधना बदल  धर्मादाव जमीन चिगर

ಅದರ ಬೆನ್ನು ಪಾನು

oldest_doc_1

०॥० मौजे दुंडीकोप पैकि नंदादीप बदल
०॥० मौजे कारीमनि पैकि नित्य नैवेद्य व

मंत्रपुष्प वगैरे आराधना बदल

एकूण एक चिगर पेसजि अमल पासून चालत आहे
त्यास हालि सुभेचे पत्राचे उजूर केला म्हणेन
विदित केला त्या वरून हे पत्र लिहिला आहे तरी माजी अमल
पासून चालत आल्या प्रमाणे सारी जमीन चाल
वणे दुसरे पत्राचे उजूर न करणे रा ॥ छ १ । रबिलकर
सु इहिदे सबैन मया व अलफे बहुत काय लिहिणे
हे विनंती


ನನ್ನ ಟಿಪ್ಪಣಿಗಳು

ಈ ಭೂದಾನ ಪತ್ರದಲ್ಲಿ ಬಂದಿರುವ ಅರಬೀ ಭಾಷೆಯ ಇಸವೀ ಸೂಚಕ ಶಬ್ದಗಳು :
ಛ ೧ – ೧ನೆ ತಾರೀಖು ;  ರಬಿಲಾಕರ – ಸೆಪ್ಟೆಂಬರ  ; ಅಲಫೆ – ೧೦೦೦ + ಮಯಾ – ೧೦೦ +  ಸಬೈನ – ೭೦ + ಇಹಿದೆ – ೧ = ೧೧೭೧ ಇದಕ್ಕೆ ೬೦೦ ಕೂಡಿಸಿದರೆ = ಕ್ರಿ.ಶ.೧೭೭೧ ನೆ ಇಸವಿ ಸೆಪ್ಟೆಂಬರ ೧ ಎಂದಾಗುತ್ತದೆ.

ಆ ಕಾಲದಲ್ಲಿ ಬಳಸುತ್ತಿದ್ದ ಕೆಲವು ಶಬ್ದಗಳು :
ಉಪರಿ – ನಿಮಗೆ ;   ಮಜಕೂರ – ಸ್ಥಳೀಕರು  ;  ಪೇಸಜಿ – ಹಿಂದಿನ ಆಡಳಿತ/ ಸರಕಾರ :  ಹಾಲಿ – ಸಧ್ಯದ  ;                ಸುಭೆ – ಸರಕಾರ ;  ಉಜೂರ – ಹಾಜರ ಪಡಿಸುವದು ;  ಅಮಲ ಪಾಸೂನ – ಹಿಂದಿನಿಂದ