ಪರಮ ಕರುಣಾಪೂರಿತಾಂಬಾ ಸ್ತೋತ್ರಮ್

ಪರಮ ಕರುಣಾಪೂರಿತಾಂಬಾ ಸ್ತೋತ್ರಮ್ ಬರಿಯ ಪ್ರಾರ್ಥನಾ ಸ್ತೋತ್ರ ಮಾತ್ರವಲ್ಲ, ಅದು ಒಂದು biographical poem, mentioning many events of his life. ದೇವಿಯ ಸ್ತುತಿ ಮಾಡುತ್ತ ಭಕ್ತ ಅವಳನ್ನು परम करुणापूरितांबा ಎಂದರೆ Goddess of Infinite Mercy ಎಂದು ಕರೆದಿದ್ದಾರೆ. ಅದರ PDF ಪ್ರತಿಯನ್ನು ಅಂತರ್ ಜಾಲದಲ್ಲಿ ಅನೇಕಸಲ ನೋಡಿದ್ದೆ. ಕೊನೆಯ ಸಲ ನೋಡಿದ್ದು ಎಪ್ರಿಲ ೧೨, ೨೦೧೬ರಲ್ಲಿ. ಇಂಗ್ಲಿಷಿನಲ್ಲಿ ೧ ರಿಂದ ೩೬ನೆ ಶ್ಲೋಕದವರೆಗೆ ಟಿಪ್ಪಣಿಗಳೂ ಇವೆ. ನಂತರ ಅಂಗಪೂಜಾ ಇದೆ. ಇದೊಂದೆ ಅಲ್ಲ, ಅವರ ಸಂಸ್ಕೃತ ಪದ್ಯ ರಚನೆಗಳಲ್ಲಿ ವೆಂಕಟೇಶ್ವರನ ಕುರಿತಾದುದೂ ಒಂದಾಗಿದೆ.

परम करुणापूरितांबा स्तॊत्रम् -Prayer to Our Mother of Infinite Mercy ಎಂಬುದು ೫೬ ಶ್ಲೋಕಗಳ ಪ್ರಾರ್ಥನಾ ಸ್ತೋತ್ರ/ ಕಾವ್ಯ. ಅದನ್ನು ರಚಿಸಿದವರು ಜೆ. ಸೇತುರಾಮ ಎಂಬ ಮದರಾಸು (ಈಗಿನ ಚೆನ್ನೈ) ಮೂಲದ ವ್ಯಕ್ತಿ.

ಅವರ ಸಂಕ್ಷಿಪ್ತ ಮಾಹಿತಿ : Jayaram Sethuraman, Professor Emeritus, Robert O. Lawton Distinguished Professor, Department of Statistics, Florida State University, Tallahassee. & Courtesy Professor, Department of Religion. ಪ್ರೊ.ಜಯರಾಮ ಸೇತುರಾಮ ನಿವೃತ್ತಿಯ ನಂತರ ಈಗ- ೨೦೦೫ ರ ನಂತರ, ಐ.ಎಸ್.ಐ, ಚೆನೈದಲ್ಲಿ ಫುಲ್ ಬ್ರಾಯಿಟ್ ಸೀನಿಯರ ಲೆಕ್ಚರರ ಆಗಿದ್ದಾರೆ.

೧೯೩೭ರಲ್ಲಿ ಹುಟ್ಟಿದ್ದ ಸೇತುರಾಮ ಅವರ ತಂದೆಗೆ ಹುಬ್ಬಳ್ಳಿಯಲ್ಲಿ ರೇಲ್ವೆಯಲ್ಲಿ ಇಲೆಕ್ಟ್ರಿಕಲ ಇಂಜಿನೀಯರಿಂಗ ವಿಭಾಗದಲ್ಲಿ ಕೆಲಸವಿದ್ದಿತು. ಸೇತುರಾಮ ತಮ್ಮ ತಂದೆಯ ಎಂಟು ಮಕ್ಕಳಲ್ಲಿ ನಾಕನೆಯವರು. ಸಂತ ಮೇರಿ ಹಾಯಸ್ಕೂಲಿನಲ್ಲಿ ಕಲಿಯುತ್ತಿದ್ದರು. ಅದು ಕ್ಯಾಥೋಲಿಕ್ ಜೇಸುಯಿಟ ಶಾಲೆ. ಶಿಕ್ಷಕರಲ್ಲಿ ಕೆಲವರು ಸ್ವಿಝರಲ್ಯಾಂಡ, ಜರ್ಮನಿ, ಫ್ರಾನ್ಸ ಗಳಿಂದ ಬಂದವರು. ೧೩ನೆ ವಯಸ್ಸಿನಲ್ಲಿ, ಅಂದರೆ ೧೯೫೦ರಲ್ಲಿ, ತಂದೆಗೆ ಮದ್ರಾಸಿಗೆ ವರ್ಗವಾಗಿ ಈ ಶಾಲೆ ಬಿಟ್ಟು ಅಲ್ಲಿಗೆ ಹೋದರು. ಅಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿದಾಗ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮರಾಗಿ ಬಂದರು.

ಮುಂದೆ ೧೯೬೨ರಲ್ಲಿ ಇಂಡಿಯನ ಸ್ಟ್ಯಾಟಿಸ್ಟಿಕಲ ಇನಸ್ಟಿಟ್ಯೂಟ ದಿಂದ ಪಿ.ಎಚ್.ಡಿ. ಮಾಡಿ ಡಾಕ್ಟರೇಟ ಪದವಿ ಪಡೆದರು. ಫ್ಲೋರಿಡಾ ಸ್ಟೇಟ ಯುನಿವರ್ಸಿಟಿ ಅವರು ಪ್ರೊಫೆಸರ ಆಗಿ ಸೇರಿಕೊಂಡದ್ದು ೧೯೬೮ರಲ್ಲಿ. ಇದರ ಮೊದಲು ಮತ್ತು ನಂತರ ಅವರು ಕೆಲಸ ಮಾಡಿದ ಕೆಲ ವಿಶ್ವ ವಿದ್ಯಾಲಯಗಳು – ಯುನಿವರ್ಸಿಟಿ ಆಫ ಕರೋಲಿನಾ, ಮಿಚಿಗನ ಸ್ಟೇಟ ಯುನಿವರ್ಸಿಟಿ, ಸ್ಟ್ಯಾನಫೋರ್ಡ ಯುನಿವರ್ಸಿಟಿ, ಯುನಿವರ್ಸಿಟಿ ಆಫ ಪಿಟ್ಸಬರ್ಗ ಮತ್ತು ಇಂಡಿಯನ ಸ್ಟ್ಯಾಟಿಸ್ಟಿಕಲ ಇನಸ್ಟಿಟ್ಯೂಟ.

 

amba-st2